masthmagaa.com:

ರಾಜ್ಯದಲ್ಲಿ ಇಂದು 1,301 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 17 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,44,764 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 37,248 ಆಗಿದೆ. ಇಂದು 1,614 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯ 28,88,520 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 18,970 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.86 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 4.28 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 3.95 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ.

ಇಂದು ಮೃತಪಟ್ಟವರು:

ಹಾಸನ 3
ಬೆಂಗಳೂರು ಗ್ರಾಮಾಂತರ 2
ಬೆಂಗಳೂರು ನಗರ 2
ಕೊಡಗು 2
ಮೈಸೂರು 2
ಚಿಕ್ಕಮಗಳೂರು 1
ದಕ್ಷಿಣ ಕನ್ನಡ 1
ಧಾರವಾಡ 1
ಶಿವಮೊಗ್ಗ 1
ತುಮಕೂರು 1
ಉಡುಪಿ 1

-masthmagaa.com

Contact Us for Advertisement

Leave a Reply