masthmagaa.com:

ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 46 ಜನರಿಗೆ ಸೋಂಕು ತಗುಲಿದೆ ಅಂತ ಚೀನಾದ ನ್ಯಾಷನಲ್​ ಹೆಲ್ತ್ ಕಮಿಷನ್ ಹೇಳಿದೆ. ಇದರಲ್ಲಿ 35 ಪ್ರಕರಣ ಸ್ಥಳೀಯವಾಗಿ ಹರಡಿದ್ದಾಗಿದ್ದು, 11 ಪ್ರಕರಣ ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿದೆ.

ಸ್ಥಳೀಯವಾಗಿ ಹರಡಿದ 35 ಪ್ರಕರಣಗಳಲ್ಲಿ ಷಿನ್​ಜಿಯಾಂಗ್​ ಉಗರ್ ಸ್ವಾಯತ್ತ ಪ್ರದೇಶದಲ್ಲಿ 22 ಪ್ರಕರಣ ಮತ್ತು ಲಿಯೊನಾಂಗ್ ಪ್ರಾಂತ್ಯದಲ್ಲಿ 13 ಪ್ರಕರಣ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ, 19 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಚೀನಾದಲ್ಲಿ ಇದುವರೆಗೆ 83,830 ಜನರಿಗೆ ಸೋಂಕು ತಗುಲಿದೆ. 4,634 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 79,000+ ಸೋಂಕಿತರು ಗುಣಮುಖರಾಗಿದ್ದಾರೆ. ರೋಗ ಲಕ್ಷಣ ಕಾಣಿಸದ 292 ಜನರ ಮೇಲೆ ನಿಗಾ ಇಡಲಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ.

-masthmagaa.com

Contact Us for Advertisement

Leave a Reply