masthmagaa.com:

ದೆಹಲಿ: ಪಕ್ಷ ಬಯಸಿದ ಕರ್ತವ್ಯ ನಿರ್ವಹಿಸಲು ನಾನು ಸಿದ್ಧ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್​​ನಲ್ಲಿ ಅಧ್ಯಕ್ಷರ ಆಯ್ಕೆ ಕಸರತ್ತು ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಸರಣಿ ಸಭೆಗಳು ನಡೆಯಲಿವೆ. ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್​​​​ ನಾಯಕತ್ವ ಬದಲಾವಣೆ ಆಗ್ರಹಿಸಿ ಕೆಲ ತಿಂಗಳ ಹಿಂದೆ ಪತ್ರ ಬರೆದಿದ್ದ ಹಿರಿಯ ನಾಯಕರಾದ ಶಶಿ ತರೂರ್, ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಎ.ಕೆ ಆಂಟನಿ, ಅಶೋಕ್ ಗೆಹ್ಲೋಟ್ ಕೂಡ ಭಾಗಿಯಾಗಿದ್ರು.

ಅಸಮಾಧಾನಿತ ಕಾಂಗ್ರೆಸ್ ನಾಯಕರೊಂದಿಗೆ ಗಾಂಧಿ ಕುಟುಂಬದಿಂದ ನಡೆದ ಮೊದಲ ಮಾತುಕತೆ ಇದಾಗಿತ್ತು. ಬಂಡೆದ್ದು ಪತ್ರ ಬರೆದಿದ್ದ ಹಿರಿಯ ನಾಯಕರು ಕೂಡ ಇಂದು ಸೋನಿಯಾ ಗಾಂಧಿಯವರ ಮುಂದೆ ತಮ್ಮ ಚಿಂತೆಯನ್ನು ಹೇಳಿಕೊಂಡಿದ್ದಾರೆ ಅಂತ ಮೂಲಗಳು ತಿಳಿಸಿವೆ.

ಈ ನಡುವೆ ರಾಹುಲ್ ಗಾಂಧಿಗೆ ತುಂಬಾ ಆಪ್ತರಾಗಿದ್ದ ಎನ್​ಎಸ್​​​ಯುಐ ಮುಖ್ಯಸ್ಥೆ ರುಚಿ ಗುಪ್ತಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಸಂಘಟನಾತ್ಮಕ ಬದಲಾವಣೆಗಳನ್ನು ಜಾರಿಗೊಳಿಸುವಲ್ಲಿ ತುಂಬಾ ವಿಳಂಬ ಮಾಡುತ್ತಿದ್ದಾರೆ ಅಂತ ತಮ್ಮ ರಾಜೀನಾಮೆಗೆ ಕಾರಣ ನೀಡಿದ್ದಾರೆ.

-masthmagaa.com

Contact Us for Advertisement

Leave a Reply