ರಾಜ್ಯದಲ್ಲಿ ಈಗ ಪರಿಹಾರದ್ದೇ ಗದ್ದಲ, ಗಲಾಟೆ. ಪರಿಹಾರ ಸಿಗಲಿಲ್ಲ ಅಂತ ಉತ್ತರ ಕರ್ನಾಟಕದ ಜನ ಕಂಗಾಲಾಗಿದ್ದಾರೆ. ಆದ್ರೆ ಹಿಮಾಚಲ ಪ್ರದೇಶದಲ್ಲಿ ಒಬ್ಬರು ಅಜ್ಜ ಪರಿಹಾರ ನೀಡಲಿಲ್ಲ ಅಂತ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಕಂಗ್ರಾ ಎಂಬಲ್ಲಿ ವೃದ್ಧರೊಬ್ಬರು ತಮ್ಮ ಮನೆ ಮುಂದೆ ರಸ್ತೆಗೆ ಬಿದಿರುಗಳನ್ನು ಅಡ್ಡಹಾಕಿ ಬರೋ ವಾಹನಗಳ ಬಳಿ ಶುಲ್ಕ ವಸೂಲಿ ಮಾಡಿದ್ದಾರೆ. ಯಾಕೆ ಎಂದು ಕೇಳಿದ್ದಕ್ಕೆ ನಮ್ಮ ಮನೆ ಹಾಳಾಗಿದೆ. ಆದ್ರೆ ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಅದಕ್ಕೆ ಹೀಗೆ ಶುಲ್ಕ ವಸೂಲಿ ಮಾಡ್ತಿದ್ದೀನಿ ಎಂದಿದ್ದಾರೆ. ಆದ್ರೆ ಪಾಪ ಆ ಅಜ್ಜನನ್ನು ಬಂಧಿಸಿರುವ ಪೊಲೀಸರು ಸುಲಿಗೆ ಕೇಸ್ ಜಡಿದಿದ್ದಾರೆ. https://www.facebook.com/TimesofIndia/videos/392162778399350/ Share on: WhatsAppContact Us for AdvertisementRead More →

ಒಂದ್ಕಡೆ ಪ್ರವಾಹದಿಂದ ಬಿಹಾರದ ಜನ ಕಂಗೆಟ್ಟು ಹೋಗಿದ್ದಾರೆ. ಆದ್ರೆ ಅದರ ನಡುವೆಯೇ ಮತ್ತೊಂದು ದೊಡ್ಡ ದುರಂತ ಸಂಭವಿಸಿದೆ. ದೋಣಿ ಮುಳುಗಿ 7 ಜನ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಬಿಹಾರದ ಕತಿಹಾರ್ ಪ್ರದೇಶದಲ್ಲಿರುವ ಮಹಾನಂದ್ ನದಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಸ್ಥಳಕ್ಕೆ ಎನ್‍ಡಿಆರ್‍ಎಫ್ ಪಡೆ ಧಾವಿಸಿದ್ದು, ಶೋಧ ಕಾರ್ಯ ಮುಂದುವರಿದಿದೆ. ಪಶ್ಚಿಮ ಬಂಗಾಳದ ಮಲಾಡ್ ಬಿಹಾರದ ಕತಿಹಾರ್ ಪ್ರದೇಶಕ್ಕೆ ಈ ದೋಣಿ ಹೊರಟಿತ್ತು. ಆದ್ರೆ ಎರಡೂ ರಾಜ್ಯಗಳ ಗಡಿಭಾಗ ಜಗನ್ನಾಥಪುರದ ಬಳಿ ಈ ದುರ್ಘಟನೆ ಸಂಭವಿಸಿದೆ. ಕಳೆದ ತಿಂಗಳಷ್ಟೇ ಆಂಧ್ರದ ಗೋಧಾವರಿಯಲ್ಲೂ ಇಂಥದ್ದೇ ದುರಂತ ಸಂಭಿವಿಸಿ, ಹಲವರು ಸಾವನ್ನಪ್ಪಿದ್ದರು. Share on: WhatsAppContact Us for AdvertisementRead More →

ಉತ್ತರ ಪ್ರದೇಶದ ಪ್ರತಾಪ್‍ಗಡ ಅಮಾನವೀಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ದುಷ್ಟರ ಗುಂಡಿನ ದಾಳಿಗೆ ತುತ್ತಾದ ಯುವಕನನ್ನು ರಕ್ಷಿಸೋ ಬದಲು ವಿಡಿಯೋ ಮಾಡೋ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಸೆಪ್ಟೆಂಬರ್ 30ರಂದು ಜೌನ್ ಪುರ ನಿವಾಸಿ ಸುನೀಲ್ ಕುಮಾರ್ ತನ್ನ ಸಂಬಂಧಿಯೊಬ್ಬರನ್ನು ಪ್ರತಾಪ್‍ಗಡಕ್ಕೆ ಬಿಟ್ಟು ವಾಪಸ್ ಆಗುತ್ತಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು ಬೈಕ್ ಅಡ್ಡ ಹಾಕಿ ಡ್ರಾಪ್ ಕೇಳಿದ್ದಾರೆ. ಈ ವೇಳೆ ಸುನೀಲ್ ಡ್ರಾಪ್ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಪಿಸ್ತೂಲ್ ತೆಗೆದು ಗುಂಡು ಎದೆಗೆ ಹಾರಿಸಿದ ದುಷ್ಕರ್ಮಿಗಳು ಸುನೀಲ್ ಬೈಕ್ ಕದ್ದು ಎಸ್ಕೇಪ್ ಆಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುನೀಲ್ ಕಿರುಚಾಡುತ್ತಾ ಸಹಾಯ ಯಾಚಿಸುತ್ತಿದ್ದರೂ ಯಾರೂ ಸಹಾಯಕ್ಕೆ ಬರಲೇ ಇಲ್ಲ. ಎಲ್ಲರೂ ಸುತ್ತ ನಿಂತು ವಿಡಿಯೋ ಮಾಡುತ್ತಿದ್ದರು. ಇನ್ನು ಕೆಲವರು ಫೋಟೋ ತೆಗೆಯುತ್ತಿದ್ದರು. ಈ ವೇಳೆ ಸುನೀಲ್ ಫೋಟೋ ತೆಗೆಯೋ ಬದಲು ನನ್ನನ್ನು ಕಾಪಾಡಿ ಎಂದು ಮನವಿ ಮಾಡಿದ್ದರು. ಆದ್ರೆ ಜನ ಮಾತ್ರ ಸಹಾಯಕ್ಕೆ ಬರಲೇ ಇಲ್ಲ. ಇದೇ ರೀತಿ ಅರ್ಧ ಗಂಟೆ ಕಳೆದ ಬಳಿಕ ಅಲ್ಲಿಗೆ ಬಂದ ಮಹಿಳೆಯೊಬ್ಬರು ಸುನೀಲ್‍ಗೆRead More →

ಈಗ ಎಲ್ಲಿ ನೋಡಿದ್ರೂ ಟಿಕ್ ಟಾಕ್ ಹುಚ್ಚು ಜೋರಾಗಿದೆ. ಇತ್ತೀಚೆಗಷ್ಟೇ ಟಿಕ್ ಟಾಕ್ ಮಾಡು ಹೋಗಿ ಆಂಧ್ರಪ್ರದೇಶದಲ್ಲಿ ಓರ್ವ ಯುವಕ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ವ್ಯಕ್ತಿಗಳ ವಿಡಿಯೋ ಕೂಡ ಟಿಕ್‍ಟಾಕ್‍ನಲ್ಲಿ ವೈರಲ್ ಆಗುತ್ತೆ. ಇವರಲ್ಲಿ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಕೂಡ ಒಬ್ಬರಾಗಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಸೋನಾಲಿಗೆ ಟಿಕೆಟ್ ಕೊಟ್ಟಿದೆ. ಇದ್ರ ಬೆನ್ನಲ್ಲೆ ಟಿಕ್‍ಟಾಕ್‍ನಲ್ಲಿ ಸೋನಾಲಿ ಫಾಲೋವರ್ಸ್ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಈವರೆಗೆ ಟಿಕ್‍ಟಾಕ್‍ನಲ್ಲಿ ಸೋನಾಲಿ ಬೆಂಬಲಿಗರ ಸಂಖ್ಯೆ ಬರೋಬ್ಬರಿ 1 ಲಕ್ಷದ 18 ಸಾವಿರ ಇದೆ. ಅಲ್ಲದೆ ಸೋನಾಲಿ ಮಾಡಿರೋ ಟಿಕ್ ಟಾಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗ್ತಿದೆ.   Share on: WhatsAppContact Us for AdvertisementRead More →

ಗುಜರಾತ್‍ನಲ್ಲಿ 9 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಇಲ್ಲಿನ ವಡೋದರಾ ಜಿಲ್ಲೆಯ ವೆಜಲ್‍ಪುರ ಗ್ರಾಮದ ಮನೆಯೊಂದರಲ್ಲಿ ಹಾವು ಅಡಗಿಕೊಂಡಿತ್ತು. ಅಲ್ಲದೆ ಒಂದು ಬೆಕ್ಕನ್ನು ನುಂಗುತ್ತಿದ್ದ ಹಾವನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ರು. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಎನ್‍ಜಿಒ ಒಂದರ ಸಹಾಯದಿಂದ ಹಾವನ್ನು ಹಿಡಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಮರದ ತುಂಡಿನ ರಾಶಿಯಲ್ಲಿ ಹೆಬ್ಬಾವು ಅಡಗಿಕೊಂಡಿತ್ತು. ಬೆಕ್ಕನ್ನು ನುಂಗಲು ಯತ್ನಿಸಿತ್ತಾದ್ರೂ, ಸಾಧ್ಯವಾಗದೇ ಉಗುಳಿದೆ ಅಂತ ಹೇಳಿದ್ದಾರೆ. ಸದ್ಯ ಹಾವು ಸೆರೆಹಿಡಿದ ಸಿಬ್ಬಂದಿ ಅರಣ್ಯಕ್ಕೆ ಬಿಟ್ಟಿದ್ದಾರೆ. Share on: WhatsAppContact Us for AdvertisementRead More →

ಪ್ರಾಣಿ ಸಂಗ್ರಹಾಲಯದಲ್ಲಿ ಮಹಿಳೆಯೊಬ್ಬರು ಸೇಫ್ಟಿಗೆ ಹಾಕಲಾದ ಪರದೆ ದಾಟಿ ಹೋಗಿ, ಸಿಂಹದ ಎದುರು ಹುಚ್ಚಾಟ ಮೆರೆದಿದ್ದಾರೆ. ಅಮೆರಿಕಾದ ನ್ಯೂಯಾರ್ಕ್‍ನ ಬ್ರೋಂಕ್ಸ್ ಪ್ರಾಣಿ ಸಂಗ್ರಹಾಲಯದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ಸೇಫ್ಟಿಗೆ ಹಾಕಲಾದ ಪ್ಯಾಸೇಜ್ ದಾಟಿ ಹೋಗಿದ್ದಾರೆ. ಸಿಂಹದ ಮುಂದೆ ನಿಂತು ಕೈ ತೋರಿಸುತ್ತಾ, ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಬೇಬಿ ಐ ಲವ್ ಯೂ ಎಂದು ಸಾಂಗ್ ಕೂಡ ಹಾಡಿದ್ದಾರೆ. ಹಾಗೆ ಮಾಡಬೇಡಿ ಎಂದು ಅಲ್ಲಿದ್ದವರೊಬ್ಬರು ಮನವಿ ಮಾಡುತ್ತಲೇ ಇದ್ದರು. ಆದರೂ ಮಹಿಳೆ ಕ್ಯಾರೆ ಎನ್ನದೇ ಸಿಂಹದ ಮುಂದೆ ಹುಚ್ಚಾಟ ತೋರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ, ಮಹಿಯೊಬ್ಬರು ನಿಯಮ ಮೀರಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. View this post on Instagram watch the video until the end you will not believe what happened next! @bronxzoo Spanish: mira el videoRead More →

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕ ಹೇರಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಒಂದೊಂದಾಗೇ ತೆಗೆಯಲಾಗುತ್ತಿದೆ. ಇಂದಿನಿಂದ ಎಲ್ಲಾ ಶಾಲಾ- ಕಾಲೇಜುಗಳು ಪುನಾರಂಭವಾಗಿದೆ. ಜೊತೆಗೆ ಭದ್ರತೆಯನ್ನೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇನ್ನು ನಿನ್ನೆ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಹಲವು ನಾಯಕರನ್ನು ಬಿಡುಗಡೆ ಮಾಡಲಾಗಿತ್ತು. ಇದ್ರ ಬೆನ್ನಲ್ಲೇ ಸಭೆ ನಡೆಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರು ಮುಂಬರುವ ಬ್ಲಾಕ್ ಡೆವೆಲಪ್‍ಮೆಂಟ್ ಕೌನ್ಸಿಲ್ ಚುನಾವಣೆ ಬಗ್ಗೆ ಸಭೆ ನಡೆಸಿದ್ರು. ನಿನ್ನೆ ಜಮ್ಮುವಿನಲ್ಲಿ ಬಂಧಿಯಾಗಿದ್ದ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ. ಆದ್ರೆ ಕಾಶ್ಮೀರ ಕಣಿವೆಯಲ್ಲಿನ ರಾಜಕೀಯ ನಾಯಕರು ಇನ್ನೂ ಕೂಡ ಬಂಧಿಯಾಗಿದ್ದಾರೆ. ಇವರ ಪೈಕಿ ಜಮ್ಮು ಕಾಶ್ಮೀರ ಮಾಜಿ ಸಿಎಂ ಉಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಫಾರೂಖ್ ಅಬ್ದುಲ್ಲಾರಂಥಹ ಪ್ರಮುಖ ನಾಯಕರು ಸೇರಿದ್ದಾರೆ. Share on: WhatsAppContact Us for AdvertisementRead More →

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಶಾಸಕಿಯೊಬ್ಬರು ಪ್ರಿಯಾಂಕಾ ಗಾಂಧಿಯ ಮೆರವಣಿಗೆ ಬಿಟ್ಟು ವಿಧಾನಸಭೆ ವಿಶೇಷ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ಭಾಗಿಯಾಗಲು ಲಕ್ನೋಗೆ ಆಗಮಿಸಿದ್ದರು. ಆದ್ರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸ್ಪರ್ಧಿಸೋ ರಾಯಬರೇಲಿ ಕ್ಷೇತ್ರದ ಶಾಸಕಿ ಆದಿತಿ ಸಿಂಗ್ ಮಾತ್ರ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ವಿಶೇಷ ಅಧಿವೇಶನಕ್ಕೆ ಹಾಜರಾಗಿದ್ದರು. ಈ ಮೂಲಕ ಸದ್ಯದಲ್ಲೇ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರೋ ಸುಳಿವು ಕೊಟ್ಟಿದ್ದಾರೆ. ಆದ್ರೆ ಇದೆಲ್ಲಾ ಸುಳ್ಳು ನಾನು ಬಿಜೆಪಿಗೆ ಹೋಗಲ್ಲ ಎಂದು ಆದಿತಿ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆದಿತಿ ಸಿಂಗ್ ಅವರ ತಂದೆ ಅಖಿಲೇಶ್ ಸಿಂಗ್ ಪ್ರಭಾವಿಯಾಗಿದ್ದು, ಗಾಂಧಿ ಕುಟುಂಬಕ್ಕೆ ತುಂಬಾನೇ ಆಪ್ತರಾಗಿದ್ದಾರೆ. Share on: WhatsAppContact Us for AdvertisementRead More →

ಫ್ಲೈಓವರ್ ಮೇಲಿಂದ ಬಸ್ ಉರುಳಿ ಕಾಲುವೆಗೆ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ರೈಸನ್ ಬಳಿ ಈ ಘಟನೆ ನಡೆದಿದೆ. ಒಟ್ಟು 36 ಮಂದಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಸ್ ರೈಸನ್ ನಿಂದ ಛತ್ತರ್‍ಪುರಕ್ಕೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಅಗ್ನಿಶಾಮಕ ದಳ ಕೂಡ ಇನ್ನೂ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. Share on: WhatsAppContact Us for AdvertisementRead More →

ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯವಾಗಿ ಬೆಂಬಲ ಸಿಗುತ್ತಲೇ ಇದೆ. ಈಗ ಮುಸ್ಲಿಂ ರಾಷ್ಟ್ರ ಸೌದಿ ರಾಜಕುಮಾರ ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತ ಇಟ್ಟ ಹೆಜ್ಜೆ ಎಷ್ಟು ಮಹತ್ವದ್ದು ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಸಲ್ಮಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ಉಭಯದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಇಬ್ಬರ ನಡುವೆ ಮಹತ್ವದ ವಿಷಯಗಳ ಚರ್ಚೆ ನಡೆದಿದೆ. ಇದಾದ ಬಳಿಕ ಕಾಶ್ಮೀರದ ವಿಚಾರದಲ್ಲಿ ಸಲ್ಮಾನ್ ಭಾರತದ ಪರ ನಿಂತಿದ್ದಾರೆ. ಇನ್ನೊಂದು ಕಡೆ ಪಾಕ್ ಕೂಡ ಸೌದಿ ಜೊತೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಸರ್ಕಸ್ ಮಾಡ್ತಿದೆ. ಅಲ್ಲದೆ ಕಾಶ್ಮೀರ ವಿಚಾರವನ್ನೂ ಮುಂದಿಟ್ಟು ಸೌದಿ ಜೊತೆ ಚರ್ಚೆ ನಡೆಸಿದೆ. ಇಂತಹ ಟೈಮಲ್ಲಿ ಸೌದಿ ರಾಜಕುಮಾರ ಸಲ್ಮಾನ್ ಕಾಶ್ಮೀರದ ವಿಚಾರವಾಗಿ ಭಾರತದ ಪರ ನಿಂತಿರೋದು ಪಾಕ್ ಮುಖಕ್ಕೆ ಹೊಡೆದಂತಾಗಿದೆ. Share on: WhatsAppContact UsRead More →