ತಾಲಿಬಾನಿಗಳ ಅಫ್ಘಾನಿನಲ್ಲಿ ಭಾರತದ ರಾಯಭಾರ ಕಛೇರಿ ಮತ್ತೆ ಆರಂಭ!
masthmagaa.com: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ್ಮೇಲೆ ಇದೇ ಮೊದಲ ಬಾರಿಗೆ ಭಾರತ ತನ್ನಅಧಿಕಾರಿಗಳನ್ನ ಕಳುಹಿಸಿಕೊಟ್ಟಿದೆ. ಇದರ ಭಾಗವಾಗಿ ನಿನ್ನೆ ಕಾಬೂಲ್ಗೆ ಭೇಟಿ ನೀಡಿರೋ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡ ತಾಲಿಬಾನ್ ಫಾರೀನ್ ಮಿನಿಸ್ಟರ್ ಮೌಲ್ವಿ ಅಮೀರ್ ಖಾನ್ ಮುತ್ತಾಕಿ ಜೊತೆಗೆ ಮಾತುಕತೆ ನಡೆಸಿದೆ. ಈ ವೇಳೆ ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ನೀಡೋಕೆ ಭಾರತಕ್ಕೆ ಸಹಕಾರ ನೀಡ್ಬೇಕು ಅಂತ ಕೇಳಿಕೊಳ್ಳಲಾಗಿದೆ. ಇತ್ತ ಅಫ್ಘಾನಿಸ್ತಾನದಲ್ಲಿ ರಾಯಭಾರ ಕಛೇರಿಯನ್ನ ಪುನಾರಂಭಿಸುವ ಬಗ್ಗೆ ಮಾಹಿತಿ ನೀಡಿರೋ ವಿದೇಶಾಂಗ ವಕ್ತಾರ ಅರಿಂಧಮ್ ಬಗ್ಚಿ ಅಫ್ಘಾನಿಸ್ತಾನದಲ್ಲಿರೋ ರಾಯಭಾರ ಕಛೇರಿಗೆ ನಮ್ಮ ಅಧಿಕಾರಿಗಳನ್ನ ಮತ್ತೆ ಕಳುಹಿಸಿಕೊಡೋ ಬಗ್ಗೆ ನಿರ್ಧಾರ ಮಾಡಿದ್ದೇವೆ ಅಂತ ಹೇಳಿದ್ದಾರೆ. ತಾಲಿಬಾನ್ ವಿದೇಶಾಂಗ ಸಚಿವ ಪ್ರತಿಕ್ರಿಯಿಸಿ ಎರಡೂ ದೇಶಗಳ ನಡುವೆ ಸಂಬಂಧ ವೃದ್ದಿಗೆ ಇದು ಒಳ್ಳೆಯ ಆರಂಭ ಅಂತ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →